ಚಿತ್ರ: ಗುರಿ

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಡಾ| ರಾಜ್‍ಕುಮಾರ್

ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ
ಮಲ್ಲಿಗೆ ಹೂಗಳು ಬಾಡಿದ ಮೇಲೆ

ಪರಿಮಳ ಚೆಲ್ಲುವುದೇ
ಹೇಳೂ.. ಪರಿಮಳ ಚೆಲ್ಲುವುದೇ

ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ

ಎಲೆ ಎಲೆಯಲ್ಲಾ ಹೂವುಗಳಾಗಿ

ಹೂವುಗಳೆಲ್ಲಾ ಬಾಣಗಳಾಗಿ
ನನ್ನೆದೆಯಾ ಸೋಕಲಿ

ಆ ಮನ್ಮಥನೇ ನನ್ನೆದುರಾಗಿ
ಮೋಹನರಾಗದೀ ನನ್ನನು ಕೂಗಿ
ಛಲದಲಿ ಹೋರಾಡಲಿ

ಎಂದಿಗು ಅವನು ಗೆಲ್ಲುವುದಿಲ್ಲಾ
ಸೋಲದೆ ಗತಿಯಿಲ್ಲಾ...

||ಕಲ್ಲಿನ ವೀಣೆಯ||
ಕಲ್ಲಿನ ವೀಣೆಯ ಮೀಟಿದರೇನು
ನಾದವೂ ಹೊಮ್ಮುವುದೇ

ಕಾಣುವ ಅಂದಕೇ ನಾ ಕುರುಡಾಗಿ
ಪ್ರೇಮದ ಹಾಡಿಗೇ ನಾ ಕಿವುಡಾಗಿ
ನೆಮ್ಮದೀ... ದೂರಾಗಿದೇ..

ರೋಷದ ಬೆಂಕಿ, ಒಡಲನು ನುಂಗಿ
ಶಾಂತಿಯು ನನ್ನಾ, ಎದೆಯಲಿ ಇಂಗಿ

ಆಸೆಯೂ ಮಣ್ಣಾಗಿದೇ..
ಗಾಳಿಯ ಹಿಡಿವ ಹಂಬಲವೇಕೆ
ಚಪಲವು ನಿನಗೇಕೇ..

||ಕಲ್ಲಿನ ವೀಣೆಯ|| 

Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಗುರಿ ಚಿತ್ರ
ವರ್ಗ: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನ